
ವಿಜಯನಗರ: ಬಾಲ್ಯ ವಿವಾಹ ಮಾಡದೇ ಮಗುವಿಗೆ ಶಿಕ್ಷಣ ಕೊಡಿಸಿ ಎಂದು ಡಣಾಯಕನಕೆರೆ ಗ್ರಾ.ಪಂ ಸದಸ್ಯ ನಾಗಪ್ಪ ಹೇಳಿದರು.
ಅವರು ಹೊಸಪೇಟೆ ತಾಲೂಕಿನ ಡಣಾಯಕನಕೆರೆ ಗ್ರಾಮದಲ್ಲಿ ಭಾನುವಾರ, ಮಕ್ಕಳ ರಕ್ಷಣಾ ನಿರ್ದೇಶನಾಲಯ ಬೆಂಗಳೂರು, ವಿಜಯನಗರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ವಿಜಯನಗರ, ಹಾಗೂ ಚೈತನ್ಯ ಗ್ರಾಮೀಣ ಅಭಿವೃದ್ಧಿ ಎಜ್ಯೂಕೇಷನಲ್ ಟ್ರಸ್ಟ್ (ರಿ) ಇವರ ಸಹೋಗದಲ್ಲಿ ಬಾಲ್ಯ ವಿವಾಹ ಕುರಿತು ಕಿರುಚಿತ್ರ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದರು.
18 ವರ್ಷಕ್ಕಿಂತ ಒಳಗಡೆ ಮದುವೆ ಮಾಡಿದಲ್ಲಿ ಕಾನೂನು ಅಪರಾಧವಾಗುತ್ತದೆ, ಇನ್ನೊಂದು ಮಗುವಿಗೆ ಜನ್ಮ ನೀಡುವಷ್ಟು ದೇಹ ಬೆಳವಣಿಗೆ ಆಗಿರುವುದಿಲ್ಲ ಹೆಣ್ಣಿಗೆ 18 ವರ್ಷ ಪೂರ್ಣಗೊಂಡಿರಬೇಕು ಮತ್ತು ಗಂಡಿಗೆ 21 ವರ್ಷ ಭರ್ತಿಯಾಗಿರಬೇಕು ಆಗ ಮಾತ್ರ ಮದುವೆ ಮಾಡಬೇಕು. 18 ವರ್ಷಕ್ಕಿಂತ ಒಳಗೆ ಗರ್ಭಿಣಿ ಆದಲ್ಲಿ ಮಗು ಆರೋಗ್ಯವಾಗಿ ಹುಟ್ಟುವುದಿಲ್ಲ ಮಗು ಅಂಗವೈಕಲ್ಯವಾಗಿ ಜನ್ಮಪಡೆಯುತ್ತದೆ.ಹಾಗಾಗಿ ಪ್ರತಿಯೊಬ್ಬರು ಬಾಲ್ಯ ವಿವಾಹ ಮಾಡುವುದನ್ನ ಬಿಡಬೇಕು ಜತೆಗೆ ಬಾಲ್ಯ ವಿವಾಹ ಮಾಡುವುದು ಕಂಡು ಬಂದರೆ ಹತ್ತಿರದ ಪೊಲೀಸ್ ಠಾಣೆ ಅಥವಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ತಿಳಿಸಬೇಕು ಹಾಗೂ ಗ್ರಾ.ಪಂ ಅಭಿವೃದ್ಧಿ ಅಧಿಕಾರಿಗೆ ತಿಳಸಬೇಕು ಎಂದರು. ಈ ಕಾರ್ಯಕ್ರಮದಲ್ಲಿ ಡಣಾಯಕನಕೆರೆ ಗ್ರಾ.ಪಂ ಸದಸ್ಯರಾದ ಮಡಿವಾಳರ ಲಕ್ಷ್ಮೀದೇವಿ ನಾಗರಾಜ, ಚೈತನ್ಯ ಗ್ರಾಮೀಣ ಅಭಿವೃದ್ಧಿ ಎಜ್ಯೂಕೇಷನಲ್ ಟ್ರಸ್ಟ್ ನ ಅಧ್ಯಕ್ಷ ಭೀಮರಾಜ ಯು, ಗ್ರಾಮದ ಮುಖಂಡರಾದ ಈಡಿಗರ ಶೇಷಪ್ಪ, ಮಡಿವಾಳರ ನಾಗರಾಜ, ಗೂಳೆಪ್ಪ, ಪರಶುರಾಮ,ಬಾವಿ ಭರಮಪ್ಪ ಹಾಗೂ ಊರಿನ ಗ್ರಾಮಸ್ಥರು ಭಾಗವಹಿಸಿದ್ದರು.


